ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ. == ಉಲ್ಲೇಖಗಳು ==